Pages

Subscribe:

Ads 468x60px

Tuesday, March 9, 2010

ಕಲೆಯ ಹೆಸರಿನಲ್ಲಿ ವಿಕೃತಿಗಳನ್ನು ಸಹಿಸಿಕೊಳ್ಳಲಾದೀತೇ?

ಕಲೆಯ ಉದ್ದೇಶ ಏನು? ಅದು ಒಂದು ಸಮಾಜದ ನಿರೀಕ್ಷೆಗಳನ್ನು, ವ್ಯಕ್ತಪಡಿಸಬೇಕೆ? ಅದರ ಸಾಧನೆಗಳನ್ನು ಪ್ರತಿಬಿಂಬಿಸಬೇಕೆ? ಆ ಮೂಲಕ ಕಲಾವಿದ ಸಮಾಜಕ್ಕೆ ತನ್ನ ಸೇವೆ ಸಲ್ಲಿಸಬೇಕೆ? ಇಷ್ಟೆಲ್ಲ ಮಾಡದಿದ್ದರೆ ಅದು ಪರಿಪೂರ್ಣ ಕಲೆ ಆಗಲು ಸಾಧ್ಯವಿಲ್ಲವೆ? If not, should it be banished from the realm of art? ಇದೆಲ್ಲ ಪ್ರಶ್ನೆಗಳು ನನ್ನ ಕಾಡಿದ್ದು ಸ್ವಲ್ಪ ದಿನಗಳ ಹಿಂದೆ ನನಗೆ ಬಂದ ಒಂದು ಈಮೇಲ್ ನೋಡಿ. ಅದರಲ್ಲಿ ಸದಾ ತನ್ನ ಚಿತ್ರಗಳಿಂದ ವಿವಾದಕ್ಕೆ ಒಳಗಾಗುತ್ತಿರುವ ಎಂ. ಎಫ್. ಹುಸೇನ್ ಬಿಡಿಸಿರುವ ದುರ್ಗೆ, ಸರಸ್ವತಿ, ಭಾರತ ಮಾತೆ ಇತರ ಹಿಂದೂ ದೇವತೆಗಳ ವಿವಾದಿತ ಚಿತ್ರಗಳಿದ್ದವು, ಜೊತೆಗೆ ಭಾರತೀಯನಾಗಿದ್ದೂ ಭಾರತೀಯರ ಭಾವನೆಗಳಿಗೆ ನೋವುಂಟು ಮಾಡಿದ ಆ ಕಲಾವಿದನನ್ನು ಕ್ಷಮಿಸಬೇಕೆ ಎನ್ನುವ ಪ್ರಶ್ನೆಗಳು.
ಆ ಚಿತ್ರಗಳಿಂದಾಗಿಯೇ ಹುಸೇನ್ ನಾಲ್ಕು ವರ್ಷಗಳ ಹಿಂದೆ ಭಾರತ ಬಿಟ್ಟು ದುಬೈಗೆ ಹೋಗಿ ನೆಲೆಸಬೇಕಾಯಿತು. ಅವರ ಮೇಲೆ 600ಕ್ಕೂ ಹೆಚ್ಚು ಮೊಕದ್ದಮೆಗಳು, ದೂರುಗಳು, FIRಗಳು ದಾಖಲಾದವು. ಈಗ ಹುಸೇನ್ ಗೆ ಕತಾರ್ ಪೌರತ್ವ ದೊರಕಿದೆ. ಇಷ್ಟು ದಿನ ಹುಸೇನ್ ಎಲ್ಲಿದ್ದಾರೆಂದು ತಲೆ ಕೆಡಿಸಿಕೊಳ್ಳದ ಕಲಾರಾಧಕರು ಈಗ ಬೊಬ್ಬೆ ಹಾಕುತ್ತಿದ್ದಾರೆ, ಹುಸೇನ್ ಭಾರತ ಬಿಟ್ಟು ಹೋದರೆ ಅದು ದೇಶಕ್ಕೆ ತುಂಬಲಾರದ ನಷ್ಟ, ಇನ್ನು ಮುಂದೆ ಹುಸೇನ್ ಭಾರತೀಯನಾಗಿ ಉಳಿಯುವುದಿಲ್ಲ. ಹುಸೇನ್ ಭಾರತಕ್ಕೆ ಬೇಕೇ ಬೇಕು, ಅವರಿಗೆ ಭಾರತ ರತ್ನ ಕೊಡಬೇಕು, ಅವರ ಮೇಲಿರುವ ನಿಷೇಧಗಳನ್ನು ತೆಗೆಯಬೇಕು, ಹಿಂದೂ ಸಂಘಟನೆಗಳು ಅವರಿಗೆ ಇಲ್ಲಿ ವಾಸಿಸಲು ಅನುವು ಮಾಡಿಕೊಡಬೇಕು ಎಂದೆಲ್ಲ.
ಅಷ್ಟಕ್ಕೂ ಭಾರತೀಯ ಅಂದರೆ ಯಾರು? ಯಾವುದೇ ದೇಶಕ್ಕೆ ಸೇರಬೇಕಾದರೆ ಒಬ್ಬ ವ್ಯಕ್ತಿಗೆ ಅಲ್ಲಿಯ citizenship ಸಿಕ್ಕಿದರೆ ಸಾಕೆ? ಆಗ ಅವನು ಅಲ್ಲಿಯ citizen, ನಾಗರಿಕ ಆಗುತ್ತಾನೆ ಹೊರತು ಆ ದೇಶೀಯ ಆಗುವುದಿಲ್ಲ ಅಲ್ಲವೇ? ಒಬ್ಬ ವ್ಯಕ್ತಿ ಭಾರತೀಯ ಆಗಬೇಕಾದರೆ ಇಲ್ಲಿ ಹುಟ್ಟಿದರೆ, ಇಲ್ಲಿನ ನೀರು, ಗಾಳಿ ಕುಡಿದರೆ ಸಾಲದು, ಇಲ್ಲಿನ ಸಂಸ್ಕೃತಿ ಅವನ ಅಂತಸ್ಸತ್ವದೊಳಗೆ ಬೆರೆತುಹೋಗಿರಬೇಕು. ಸಂಸ್ಕೃತಿ ಅಂದರೆ ಹಿಂದೂ ಸಂಸ್ಕೃತಿಯಲ್ಲ, ಎಲ್ಲರ ಭಾವನೆಗಳಿಗೂ ಬೆಲೆ ಕೊಡುವ ಭಾರತೀಯ ಸಂಸ್ಕೃತಿ. ನಿಜವಾದ ಭಾರತೀಯ ಅನ್ನಿಸಿಕೊಳ್ಳಬೇಕಾದರೆ ಇರುವುದು ಒಂದೇ criteria- ಅವನು ಜಾತಿ, ಮತಗಳನ್ನು ಬಿಡಬೇಕು, ಅದರರ್ಥ religion ಅನ್ನು ಬಿಡಬೇಕು, religiousnessನಲ್ಲ. Religiousness ಅಂದರೆ ತನ್ನ ಆತ್ಮಸಾಕ್ಶಿಗೆ ತಕ್ಕಂತೆ, ಬೇರೆಯವರಿಗೆ ನೋವಾಗದಂತೆ ನಡೆದುಕೊಳ್ಳುವುದು, ಅವರು ಹಿಂದೂ, ಸಿಖ್, ಕ್ರೈಸ್ತ, ಮುಸ್ಲಿಂ, ಪಾರ್ಸಿ ಯಾರೇ ಆಗಿರಬಹುದು.
ಕತಾರ್ ನಾಗರಿಕನಾದ ಕೂಡಲೆ ಹುಸೇನ್ ಭಾರತೀಯತೆ ಎಲ್ಲಿಗೆ ಹೋಗುತ್ತದೆ? ಅದನ್ನು ಮೊದಲೇ ಹುಸೇನ್ ಭಾರತ ಬಿಟ್ಟು ದುಬೈಗೆ ಹೋದಾಗ ಯಾಕೆ ಯೋಚಿಸಲಿಲ್ಲ ನಮ್ಮ intellectuals? ಎಂ.ಎಫ್. ಹುಸೇನ್ ಕಲಾವಿದ ಅನ್ನುವುದನ್ನು ಒಪ್ಪುವುದಾದರೆ ಕಲಾವಿದ ಯಾವ ದೇಶಕ್ಕೆ ಸೇರಿದವನು? ಕಲೆ ಯಾವ ದೇಶಕ್ಕೆ, ಸಂಸ್ಕೃತಿಗೆ ಸೇರಿದ್ದು? ಹುಸೇನ್ ಕತಾರ್ ದೇಶದಲ್ಲೇ ಇರಲಿ, ಬೇರೆಲ್ಲೇ ಇರಲಿ, ಅದರಲ್ಲಿ ನಮ್ಮ ದೇಶಕ್ಕೆ ಆಗೋ ನಷ್ಟ ಏನು? ಆ ಮಹಾನ್ ಕಲಾವಿದ ನಮ್ಮ ದೇಶದವನು ಎಂದು ನಮ್ಮ ಬೆನ್ನು ತಟ್ಟಿಕೊಳ್ಳಲು ಅವಕಾಶ ಸಿಗುವುದಿಲ್ಲ ಎಂದೇ? Anyways, ಹುಸೇನ್ ಭಾರತಕ್ಕೆ ಯಾಕೆ ಮರಳಿ ಬರಬೇಕು? ನಮ್ಮ ದೇಶದಲ್ಲಿ ಬಹಳಷ್ಟು ಜನ ಕಲಾವಿದರು nudityಯನ್ನು ತಮ್ಮ ಚಿತ್ರಗಳ ವಸ್ತುವನ್ನಾಗಿಸಿಕೊಂಡಿದ್ದಾರೆ. ಆದರೆ ದೇವತೆಗಳನ್ನಲ್ಲ. ದೇವರನ್ನು ಆ ರೀತಿ ಚಿತ್ರಿಸುವುದು ಪಾಪ ಅಂದಲ್ಲ, ನಾವು ಯಾರ ಮೇಲೆ ಪೂಜ್ಯ ಭಾವನೆ, ಗೌರವ ಇಟ್ಟುಕೊಂಡಿರುತ್ತೇವೋ ಅವರನ್ನು ನಗ್ನವಾಗಿ ಚಿತ್ರಿಸಿಕೊಳ್ಳಲು, ಕಲ್ಪಿಸಿಕೊಳ್ಳಲು, ಅವರು ಮನುಷ್ಯರಾಗಿರಲಿ, ದೇವರಾಗಿರಲಿ, ನಮ್ಮ ಕೈಯಲ್ಲಿ ಸಾಧ್ಯವಿಲ್ಲ ಎಂದು. ಅಂಥ ಕಲೆ ನಮಗೆ ಯಾಕೆ ಬೇಕು? ಕಲಾ ಸ್ವಾತಂತ್ರ್ಯ ನಮ್ಮ ದೇಶದಲ್ಲಿ ಮೊದಲಿನಿಂದಲೂ ಇದೆ. ಅಭಿವ್ಯಕ್ತಿ ಸ್ವಾತಂತ್ರ್ಯವೂ ಕೂಡ. ರಾಧಾ-ಕೃಷ್ಣರ ಪ್ರೀತಿಯಿಂದ ಹಿಡಿದು ದೇವಾಲಯಗಳ ಮೇಲೆ ಇರುವ ಗಂಡು-ಹೆಣ್ಣಿನ ಕಾಮದ ಕೆತ್ತನೆಗಳು ಎಲ್ಲವನ್ನೂ ಒಪ್ಪಿಕೊಂಡಿದ್ದೇವೆ. ಆದರೆ ದೇವತೆಗಳ ನಗ್ನತೆಯನ್ನಲ್ಲ. ಯಾಕೆಂದರೆ ಯಾವ ರೀತಿಯ ಭಾವನೆಗಳು ಎಲ್ಲಿ, ಯಾರ ಮೇಲೆ ಇರಬೇಕೆಂಬುದು ಭಾರತೀಯರಿಗೆ ಚೆನ್ನಾಗಿ ಗೊತ್ತು. ಅದಕ್ಕೇ ಇಲ್ಲಿ ಸಂಬಂಧಗಳ ಮಧ್ಯೆ ಯಾವುದೇ ಗೊಂದಲಗಳಿಲ್ಲ. ಅದಕ್ಕೇ ಇರಬೇಕು ನಮ್ಮ ದೇಶದಲ್ಲಿ ಹುಸೇನ್ ಬರೆದ ಚಿತ್ರಗಳ ’ಒಳನೋಟ’ ಅರ್ಥವಾಗದೆ ಇರುವ ಅಮಾಯಕರೇ ಜಾಸ್ತಿ. ಆ ಕಲೆಯನ್ನು ಆಸ್ವಾದಿಸದೆ ಇರುವ ಅರಸಿಕರೂ ಜಾಸ್ತಿ. ಇನ್ನು ಹುಸೇನ್ ಕಲಾಕೃತಿಗಳು ಅಪ್ರತಿಮವಾಗಿರಬಹುದು, ಅವರು ಭಾರತದ ಪಿಕಾಸೋ ಆಗಿರಬುಹುದು, ಅವರ ಚಿತ್ರಗಳು ಎರಡು ಮಿಲಿಯನ್ ವರೆಗೂ ಮಾರಾಟವಾಗಿರಬಹುದು, ಆದರೆ ಒಂದು ನಗ್ನ ದೇವತೆಯ ಚಿತ್ರದ ಮುಂದೆ ಒಂದು ಮಗುವನ್ನು ನಿಲ್ಲಿಸಿದರೆ ಅದಕ್ಕೆ ಆ ಚಿತ್ರದ ಬೆಲೆ ಗೊತ್ತಾಗದೇ ಇರಬಹುದು ಆದರೆ ಆ ಚಿತ್ರದಲ್ಲಿ ದೇವರು ಏನು ಮಾಡುತ್ತಿದ್ದಾರೆ ಎಂದು ಕೇಳಿದರೆ ಉತ್ತರ ಕೊಡಲು ನಮ್ಮಿಂದ ಆದೀತೇ?
ಸುಮಾರು 21 ವರ್ಷಗಳ ಹಿಂದೆ ಇರಾನಿ ಅಯತೊಲ್ಲ ಖೊಮೇನಿ ಸಲ್ಮಾನ್ ರಶ್ದಿಯ ಮೇಲೆ ಫತ್ವಾ ಹೊರಡಿಸಿದಾಗ ರಶ್ದಿ ಬರೆದ ವಿವಾದಿತ ಸಟಾನಿಕ್ ವರ್ಸಸ್ ಪುಸ್ತಕವನ್ನು ಮುಸ್ಲಿಮ್ ನಾಯಕರ ಒತ್ತಾಯಕ್ಕೆ ಒಳಗಾಗಿ ಮೊದಲು ನಿಷೇಧಿಸಿದ್ದು ಭಾರತ ಸರಕಾರ. ಈಗ ಹಿಂದು ಸಂಘಟನೆಗಳು ಹುಸೇನ್ ಮೇಲೆ, ಅವರು ಬರೆದ ಚಿತ್ರಗಳ ಮೇಲೆ unofficial ನಿಷೇಧ ಹೇರಿವೆ. ಹಿಮಾಚಲ ಪ್ರದೇಶದಲ್ಲಿ XI ತರಗತಿಯ ಪಠ್ಯಪುಸ್ತಕದಲ್ಲಿ ಹುಸೇನ್ ಬಗ್ಗೆ ಇದ್ದ ಪಾಠವನ್ನು ತೆಗೆದು ಕಲಾವಿದರಾದ ಶೋಭಾ ಸಿಂಗ್ ಮತ್ತು ನಿಕೊಲಸ್ ರೋರಿಕ್ ಬಗ್ಗೆ ಪಠ್ಯ ಅಳವಡಿಸಲಾಗಿದೆ. ಕಲೆಯನ್ನು ಬೇರೆ ಯಾವ ಮಾನದಂಡದಿಂದ ಅಳೆಯಬಾರದು ಎಂದು ಹೇಳಬಹುದು, ಆದರೆ ಕಲೆಗೂ ಒಂದು ಮಿತಿಯಿದೆ, ಅದರಾಚೆ ಅದು ಕೇವಲ ಕಲೆಯಾಗಿ ಉಳಿಯುವುದಿಲ್ಲ, ಅದನ್ನು ಮೆಚ್ಚುವವರೂ ಇರುವುದಿಲ್ಲ. ಅಸಾಮಾನ್ಯ ಕಲೆ ಮನಸ್ಸನ್ನು ತಣಿಸಬೇಕು, ಕೆಡಿಸಬಾರದು ಅಲ್ಲವೇ? ಹುಸೇನ್ ಭಾರತಕ್ಕೆ ಮರಳಿ ಬರಲಿ. ಯಾಕೆಂದರೆ ಪದೇ ಪದೇ ಕ್ಷಮೆ ಕೇಳಿ ಮತ್ತೆ ಅದೇ ನಗ್ನ ದೇವತೆಯರ ಚಿತ್ರಗಳನ್ನು ಬಿಡಿಸಿದ ಹುಸೇನ್ ಕೂಡ ನಮ್ಮ ದೇಶದವರೇ, ಅವರಿಗೆ ಇಲ್ಲಿರುವ ಹಕ್ಕಿದೆ. ನಮ್ಮ ಬುದ್ದಿಜೀವಿಗಳು ಹೇಳುತ್ತಾರೆಂದಲ್ಲ, ನಮ್ಮ ದೇಶದಲ್ಲಿ ಯಾರಿಗಾದರೂ ಇರಲು ಜಾಗ ಇದೆ ಎಂದು. ಕೊನೆಗೆ ನಮ್ಮ intellectual mud ಅನ್ನು ತೊಳೆದು ಹಾಕಿದರೆ ಅಲ್ಲಿ ಉಳಿಯುವುದೇನು? ಕೇವಲ intellectನ ಅಗತ್ಯವಿಲ್ಲದ ಕಲೆ ಹಾಗೂ intellectಗೆ ಜಾಗವಿಲ್ಲದ ಜಾತಿ, ಧರ್ಮಗಳು. ಆ ಕಲೆಗೂ ಈ ಜಾತಿ ಧರ್ಮಗಳಿಗೂ ಸಂಬಂಧವಿಲ್ಲ, ಕಲ್ಪಿಸಲೂ ಬಾರದು. ಹಾಗದಾಗ ಸಾಧನೆಗಳಿಗಿಂತ ಜಾಸ್ತಿ ವಿವಾದಗಳು ಸೃಷ್ಟಿಯಾಗುತ್ತವೆ. ಆ ಸಾಧನೆಗಳ ಮೇಲೆ ಇರುವ ಗೌರವವೂ ಕಣ್ಮರೆಯಾಗುತ್ತದೆ. ಎಂ. ಎಫ್. ಹುಸೇನ್, ಸಲ್ಮಾನ್ ರಶ್ದಿ, ತಸ್ಲೀಮಾ ನಸ್ರೀನ್ ಎಲ್ಲರಿಗೂ ನಮ್ಮಲ್ಲಿ ಜಾಗ ಇದೆ, ಬದುಕುವ ಸ್ವಾತಂತ್ರ್ಯ ಇದೆ, ಅದನ್ನು ದುರುಪಯೋಗಪಡಿಸಿಕೊಳ್ಳದಿದ್ದರೆ. - ಶ್ವೇತಾ ಪಾಂಗಣ್ಣಾಯ