Pages

Subscribe:

Ads 468x60px

Friday, July 9, 2010

ಇಷ್ಟೆಲ್ಲ ಓದಿಕೊಂಡರೂ ಮಾನವೀಯತೆ ಹುಟ್ಟಲಿಲ್ಲವೇಕೆ?

ಒಂದು ವರ್ಷದ ಹಿಂದೆ ಹತ್ತಿರದ ಕುಂಬಾರಗೇರಿಗೆ ಯಾರನ್ನೋ ಭೇಟಿಮಾಡಲು ಹೋದಾಗ ಆ ಮನೆಯಲ್ಲಿದ್ದ ಬಾಣಂತಿಯೊಬ್ಬರು ಮಾತಿಗೆ ಸಿಕ್ಕಿದರು. ಮಾತು ಹೆರಿಗೆ, ಆಸ್ಪತ್ರೆಯತ್ತ ಹೊರಳಿದಾಗ ಅವರು ಹೇಳಿದ ವಿಷಯಗಳು ದಿಗಿಲು ಹುಟ್ಟಿಸುವಂತಿತ್ತು. ಅಲ್ಲಿವರೆಗೆ ಸರಕಾರಿ ಆಸ್ಪತ್ರೆಗಳಲ್ಲಿ ಬಡವರಿಂದ ದುಡ್ಡು ಕೀಳುತ್ತಾರೆ, ನಿರ್ಲಕ್ಷ್ಯ ತೋರುತ್ತಾರೆ ಎಂದೆಲ್ಲ ಕೇಳಿದ್ದೆ. ಆದರೆ ತುಂಬಿದ ಬಸುರಿಯರನ್ನು ಗಂಟೆಗಟ್ಟಲೆ ಕೂರಲು ಜಾಗವೂ ಇಲ್ಲದೆ ನಿಲ್ಲಿಸಿ ಕಾಯಿಸುತ್ತಾರೆ, ರಾತ್ರಿ ಹೊತ್ತಿನಲ್ಲಿ ಒಬ್ಬರನ್ನೆ lab testing ಅಂತ ಕಳಿಸುತ್ತಾರೆ ಎಂದು ಗೊತ್ತಿರಲಿಲ್ಲ. ಆಮೇಲೆ ಆಸ್ಪತ್ರೆಗೆ ಹೋಗಿ ನೋಡಿದಾಗ ಅಲ್ಲಿ ಹಸಿ ಬಾಣಂತಿಯರನ್ನು, ಆಗ ತಾನೆ ಹುಟ್ಟಿದ ಹಸುಮಕ್ಕಳನ್ನು ನೆಲದ ಮೇಲೆ ಹಾಸಿಗೆಯೂ ಇಲ್ಲದೆ ಮಲಗಿಸಿದ್ದರು. ಕೆಲವು ರೋಗಿಗಳು ಅಲ್ಲೆ ಪಕ್ಕದ ಜಗಲಿಯ ಬದಿಯಲ್ಲಿ ವಾಕರಿಸುತ್ತಿದ್ದರು. ಎಲ್ಲಕ್ಕಿಂತ ದಿಗ್ಬ್ರಮೆ, ಆತಂಕ ಹುಟ್ಟಿಸಿದ್ದು ಹೆರಿಗೆ ನೋವಿನಿಂದ ಒದ್ದಾಡುತ್ತಿರುವ ಹೆಣ್ಣುಮಕ್ಕಳನ್ನು labour wardನ ಟೇಬಲ್‌ ಮೇಲೆ ಕುಕ್ಕುತ್ತಾರೆ, ಅವರಿಗೆ ಹೆರಿಗೆ ಮಾಡಿಸುವ ಬದಲು ಅಲ್ಲಿ ಯಾವ ಡಾಕ್ಟರ್, ಆಯಾ, ನರ್ಸ್ ಇಲ್ಲದಂತೆ ಹೊರಹೋಗುತ್ತಾರೆ, ನೋವಿನಿಂದ ಅಳುವ ಹೆಣ್ಣುಮಕ್ಕಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ, ಮಗು ತೋರಿಸಬೇಕಾದರೆ ದುಡ್ಡು ಕೇಳುತ್ತಾರೆ ಎನ್ನುವ ವಿಷಯ ಕೇಳಿ. ಆಗ ಇವರು ಮನುಷ್ಯರಾ ಅನ್ನಿಸಿತ್ತು.
ಇದು ’ಉಚಿತ’ ಸರಕಾರಿ ಆಸ್ಪತ್ರೆಗಳ ಕಥೆ ಮಾತ್ರ ಅಲ್ಲ. ಖಾಸಗಿ ಆಸ್ಪತ್ರೆಗಳೂ ನಾನಾ ಕಾರಣ ಹೇಳಿ ಸತ್ತವರನ್ನು ಇನ್ನೂ ಬದುಕಿದ್ದಾರೆಂದು ಯಾರಿಗೂ ತೋರಿಸದೆ ಲಕ್ಷಾಂತರ ರೂಪಾಯಿ ವಸೂಲಿ ಮಾಡುವುದೂ ಸಾಮಾನ್ಯ.
ಇಷ್ಟಲ್ಲಾ ಅನಾಗರಿಕವಾಗಿ ನಡೆದುಕೊಳ್ಳುವವರು ಅನಕ್ಷರಸ್ತರಲ್ಲ, ಅಮಾಯಕರೂ ಅಲ್ಲ. ರೋಗಿಗಳ ಸೇವೆ ಮಾಡುತ್ತೇವೆಂದು ಐದೂವರೆ ವರ್ಷ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮೆಡಿಕಲ್, ನರ್ಸಿಂಗ್ ಓದಿ ಬಂದಿರುವ ಡಾಕ್ಟರ್‌ಗಳು, ನರ್ಸ್‌ಗಳು. ತಮ್ಮ ಮಕ್ಕಳು ಮೆಡಿಕಲ್ ಓದುತ್ತಾರೆಂದರೆ ಅಪ್ಪ-ಅಮ್ಮಂದಿರಿಗೆ ಹೆಮ್ಮೆ, ಮಕ್ಕಳು ಬೇರೆಯವರ ಜೀವ ಉಳಿಸುವ ಪುಣ್ಯದ ಕೆಲಸ ಮಾಡುತ್ತಾರೆ ಎಂದು. ಅವರಿಗೂ ಅಷ್ಟೆ ಮೊದಲು ಇರುವ ಆದರ್ಶಗಳು ಓದಿ ಮುಗಿದು ಡಾಕ್ಟರ್ ಆದಾಗ ಎಲ್ಲಿ ಹೋಗುತ್ತವೆ? ಮೊನ್ನೆ ಯಾರೋ ಕೇಳಿದರು ರಾಜಕಾರಣಿಗಳು ಮನುಷ್ಯರಲ್ಲವೆ? ಅವರಿಗೂ ಕರುಣೆ ಇಲ್ಲವೆ ಎಂದು? ಅವರೂ ನಮ್ಮ ನಿಮ್ಮ ಹಾಗೆ ಮನುಷ್ಯರೇ. ಅವರಿಗೂ ಸಂಬಂಧಗಳು, ಮಾನವೀಯತೆ ಎಲ್ಲಾ ಇರುತ್ತವೆ. ಆದರೆ ಪ್ರತಿ ದಿನ ನೂರಾರು ಜನಗಳ ಜೊತೆ ವ್ಯವಹರಿಸುವಾಗ ಕರುಣೆ, ಮನುಷ್ಯತ್ವ ಮಾಯವಾಗಿ, ಜನ ಬರೀ statistics ಆಗುತ್ತಾರೆ, individual ಆಗಿರುವುದಿಲ್ಲ. ಬಹುಶ ವೈದ್ಯರ ವಿಚಾರದಲ್ಲೂ ಹೀಗೇ ಆಗುತ್ತದೇನೋ. ವರ್ಷಗಟ್ಟಲೆ ರೋಗಿಗಳನ್ನು ನೋಡಿದಾಗ ಅಲ್ಲಿ ಅನುಕಂಪ ಮರೆಯಾಗಿ ರೋಗಿಗಳು ಮನುಷ್ಯರಾಗಿರದೆ ಬರೀ ಮನೆಗೆ ಹೋಗುವ ಮುನ್ನ ಮುಗಿಸಬೇಕಾದ ಕರ್ತವ್ಯವಾಗುತ್ತಾರೆ.
ಸಿಟಿಗಳಲ್ಲಿ ಬೀದಿಗೊಬ್ಬರು ಇಂತಹ money-oriented ವೈದ್ಯರಿದ್ದರೆ, ಹಳ್ಳಿಗಳ ಕಥೆಯೇ ಬೇರೆ. ಅಲ್ಲಿ ದುಡ್ಡು ಕೊಟ್ಟು ಚಿಕಿತ್ಸೆ ಮಾಡಿಸಿಕೊಳ್ಳುವುದಕ್ಕೂ ಡಾಕ್ಟರ್‌ಗಳೇ ಇಲ್ಲ. ನಮ್ಮ ರಾಜ್ಯದಲ್ಲಿ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಶೇ. 90ರಷ್ಟರಲ್ಲಿ ವೈದ್ಯರಿಲ್ಲ, ಇದ್ದರೂ ಹೆಸರಿಗೆ ಮಾತ್ರ, ಅವರೆಲ್ಲ ಆಸ್ಪತ್ರೆಗಳಿಗೆ ಬರುವುದೇ ಕಡಿಮೆ. ಬಿಳಿಗಿರಿರಂಗನ ಬೆಟ್ಟದಲ್ಲಿ ಟ್ರೈನಿಂಗ್‌ಗೆಂದು ಬಂದಿದ್ದ ಆಗ ತಾನೆ ಡಿಗ್ರಿ ಮುಗಿಸಿದ ಡಾಕ್ಟರ್‌ಗಳನ್ನು ಹಳ್ಳಿಗಳಲ್ಲಿ ಬಂದು ಇರಿ ಅಂದರೆ "ನಾವ್ಯಾಕೆ ಇಂತಹ ಕೊಂಪೆಯಲ್ಲಿ, ಕಾಡಲ್ಲಿ ಇರಬೇಕು? ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮನೆಯವರು ನಮ್ಮನ್ನು ಓದಿಸಿದ್ದು ಇಲ್ಲಿ ಬಂದು ನಮ್ಮ ಅವಕಾಶಗಳನ್ನು ಹಾಳು ಮಾಡಿಕೊಳ್ಳುವುದಕ್ಕಲ್ಲ. ನಮಗೆ ಸಿಟಿಯಲ್ಲಿ ಲಕ್ಷ ಲಕ್ಷ ಸಂಪಾದನೆ ಮಾಡಬೇಕು," ಅಂದರು. ಹಾಗಾದರೆ ಬಡವರಿಗೆ ರೋಗಕ್ಕೆ ಚಿಕಿತ್ಸೆ ಪಡೆಯುವ, ಬದುಕುವ ಹಕ್ಕಿಲ್ಲವೇ?  ಹಳ್ಳಿಗಳಲ್ಲಿ ಇರುವುದಕ್ಕೆ ಸರಿಯಾದ ಸೌಲಭ್ಯಗಳಿಲ್ಲ, ವೈದ್ಯಕೀಯ ಉಪಕರಣಗಳು, ಚಿಕಿತ್ಸೆಗೆ ಬೇಕಾದ ವ್ಯವಸ್ಥೆಯಿಲ್ಲ, ಮಕ್ಕಳಿಗೆ ಶಾಲೆಯಿಲ್ಲ... ಹೀಗೆ ಹತ್ತು ಹಲವು ಕಾರಣಗಳನ್ನು ಹೇಳುತ್ತಾರೆ. ಅದು ನಿಜವೇ ಆದರೂ ಡಾಕ್ಟರ್‌ಗಳು ಹಳ್ಳಿಗಳಿಗೆ ಹೋಗಲು ಮನಸು ಮಾಡಿದರೆ, ಮುಂದೆ ಬಂದರೆ ಸೌಲಭ್ಯಗಳನ್ನು ಸೃಷ್ಟಿ ಮಾಡುವುದು ಅಷ್ಟು ಕಷ್ಟವಲ್ಲ. ಆದರೆ ಅವರ ಹಿಂಜರಿಕೆಗೆ ಅದೊಂದೆ ಕಾರಣವಲ್ಲ. ಎಲ್ಲರ ತರ ಅವರಿಗೂ ಪೇಟೆಯ ನಾಜೂಕು ಬದುಕು ಬೇಕು. ಇನ್ನು ಹಳ್ಳಿಗಳಲ್ಲಿ ಸೇವೆ ಮಾಡುವುದನ್ನು ಕಡ್ಡಾಯ ಮಾಡಿದರೆ ಅದರಿಂದ ಏನೂ ಉಪಯೋಗವಿಲ್ಲ. ಯಾಕೆಂದರೆ ದುಡ್ಡು, ಪ್ರಭಾವ ಇರುವವರು ಅಲ್ಲಿಗೆ ಹೋಗುವುದನ್ನು ತಪ್ಪಿಸಿಕೊಳ್ಳುತ್ತಾರೆ, ಸಿಕ್ಕಿಹಾಕಿಕೊಳ್ಳುವುದು ಯಥಾಪ್ರಕಾರ ಬಡ ವೈದ್ಯರು. ಚತ್ತೀಸ್‌ಘರ್‌ ರಾಜ್ಯದ ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿ, ಯಾರೂ ಹೋಗಲು ಒಪ್ಪದ ಕಗ್ಗಾಡಿನಲ್ಲಿ ಸೇವೆ ಮಾಡಲು ಕೆಲ ವೈದ್ಯರು ದಿಲ್ಲಿಯ ತಮ್ಮ ಲಾಭದಾಯಕ ವೃತ್ತಿಯನ್ನು, ಐಷಾರಾಮಿ ಜೀವನವನ್ನು ಬಿಟ್ಟು ಜನ್ ಸ್ವಾಸ್ತ್ಯ ಸಂಸ್ಥಾನ್ ಎನ್ನುವ ಸಂಸ್ಥೆ ಕಟ್ಟಿಕೊಂಡು, ಕಾಡಿನಲ್ಲಿ ಮೈಲಿಗಟ್ಟಲೆ ನಡೆದು, ಸರಿಯಾದ ನೆಲೆ ಇಲ್ಲದಿದ್ದರೂ ರೋಗಿಗಳಿಂದ ಬರೀ ಎರಡರಿಂದ ಐದು ರೂಪಾಯಿ ತೆಗೆದುಕೊಂಡು ಸೇವೆ ಮಾಡುತ್ತಿರುವಾಗ ನಮ್ಮ ಕರ್ನಾಟಕದ ವೈದ್ಯರಿಗೆ ಯಾಕೆ ಸಾಧ್ಯವಿಲ್ಲ?
ಇನ್ನು ಹಳ್ಳಿಗಳಲ್ಲಿ ಸೇವೆ ಮಾಡುವುದಕ್ಕೆ ಮಾತ್ರವಲ್ಲದೆ ಇಡೀ ದೇಶದಲ್ಲಿ ಡಾಕ್ಟರ್‌ಗಳ ಕೊರತೆ ಇದೆ. 1,722 ಜನರಿಗೆ ಕೇವಲ ಒಬ್ಬ ಅಲೋಪತಿ ವೈದ್ಯರಿದ್ದಾರೆ. ವರ್ಷಕ್ಕೆ ಕೇವಲ 31,000 ಎಂಬಿಬಿಎಸ್ ಪಧವೀಧರರು ಹೊರಬರುತ್ತಾರೆ. ಇವರಲ್ಲಿ ಶೇ. 1ಷ್ಟೂ ಹಳ್ಳಿಗಳಿಗೆ ಹೋಗುವುದಿಲ್ಲ. ಮೊದಲೆಲ್ಲ ಹಳ್ಳಿಗಳಲ್ಲಿ ಡಾಕ್ಟರ್‌ಗಳಿಲ್ಲದಿದ್ದರೆ ನಾಟಿ ವೈದ್ಯರಿದ್ದರು, ಆಯುರ್ವೇದ ಪಂಡಿತರಿದ್ದರು ಜೊತೆಗೆ ನಂತರ ಹೆರಿಗೆಯಂತಹ ಕೆಲಸಕ್ಕೆ ದಾದಿಯರಿದ್ದರು. ಇವರೆಲ್ಲ ಕಾಲೇಜುಗಳಿಗೆ ಹೋಗಿ ಕಲಿತವರಲ್ಲ. ಈಗಲೂ ಅಷ್ಟೆ ಹಳ್ಳಿ ಜನಗಳಿಗೆ ಡಾಕ್ಟರ‍್ಗಳ ಅಗತ್ಯವಿದ್ದರೂ ಸಣ್ಣ ಸಣ್ಣ ಖಾಯಿಲೆಗಳಿಗೆ ಚೀನಾದ ’ಬರಿಗಾಲ ವೈದ್ಯರ’ ತರ ನಮ್ಮ ಹಳ್ಳಿಗಳ ಪ್ರಾಥಮಿಕ ಶಿಕ್ಷಣವನ್ನಾದರೂ ಕಲಿತಿರುವ ಜನರಿಗೆ ಟ್ರೈನಿಂಗ್ ಕೊಡಬಹುದು. ಜೊತೆಗೆ ಹಳ್ಳಿಗಳಲ್ಲಿ ಸೇವೆ ಮಾಡಲು ಮೂಲ ಸೌಲಭ್ಯಗಳನ್ನಾದರೂ ಕಲ್ಪಿಸಿದರೆ ಆಸಕ್ತಿಯಿರುವ ವೈದ್ಯರು ಮುಂದೆ ಬಂದಾರು. ಖಾಸಗೀ ಆಸ್ಪತ್ರೆಗಳು ಒಳ್ಳೆಯದೇ, ಆದರೆ ಅದು ಶ್ರೀಮಂತರಿಗೆ, ಪಟ್ಟಣಗಳಲ್ಲಿರುವವರಿಗೆ. ಹಳ್ಳಿಯಲ್ಲಿ ಇರುವವರಿಗೆ, ಬುಡಕಟ್ಟು ಜನಾಂಗಗಳಿಗೆ, ನೂರಾರು ಮೈಲಿ ಕಾಡಿನಲ್ಲಿ ಇರುವವರಿಗೆ ಸರಕಾರದ ಸವಲತ್ತುಗಳೇ ಗತಿ. ಅಲ್ಲಿಗೆ ಯಾವ ಖಾಸಗಿ ಆಸ್ಪತ್ರೆಯೂ ಕಾಲಿಡುವುದಿಲ್ಲ.
ದಾವಣಗೆರೆಯಲ್ಲಿ ಡಾ. ಕೇಶವಾಚಾರ್ಯ ಎನ್ನುವ ಪಶು ವೈದ್ಯರಿದ್ದಾರೆ. ತುಂಬಾ ವರ್ಷಗಳ ಹಿಂದೆ ಸರ್ಕಸ್‌ನ ಒಂದು ಆನೆಗೆ ಅವರು ಚಿಕಿತ್ಸೆ ನೀಡಿದ್ದರು ಮತ್ತು ಅದನ್ನು ಮರೆತಿದ್ದರು. ಹಲವು ವರ್ಷಗಳಾದ ಮೇಲೆ ಒಂದು ದಿನ ಅವರ ಆಸ್ಪತ್ರೆಯ ಎದುರು ಒಂದು ಆನೆ ಬಂದು ನಿಂತಿತ್ತು. ಜನರೆಲ್ಲ ಭಯದಿಂದ ಅದನ್ನು ನೋಡಿ ಓಡುತ್ತಿದ್ದರು. ಆದರೆ ಅದು ಬಂದಿದ್ದು ತನಗೆ ಚಿಕಿತ್ಸೆ ನೀಡಿದ ವೈದ್ಯರನ್ನು ನೋಡಲು. ಎಷ್ಟೋ ವರ್ಷಗಳಾದ ಮೇಲೆ ಆ ಊರಿಗೆ ಅದೇ ಸರ್ಕಸ್ ಬಂದಿತ್ತು ಮತ್ತು ಆ ಆನೆ ತನಗೆ ಜೀವ ನೀಡಿದ ವೈದ್ಯರನ್ನು ಹುಡುಕಿಕೊಂಡು ಬಂದಿತ್ತು. ಇದು ವೈದ್ಯರ-ರೋಗಿಯ ಮಧ್ಯೆ ಇರಬೇಕಾದ ಬಾಂಧವ್ಯ. ಆದರೆ ಈಗ ವೈದ್ಯರಲ್ಲಿ ಆ ಕರ್ತವ್ಯ ನಿಷ್ಟೆಯಿಲ್ಲ, ರೋಗಿಗಳಲ್ಲಿ ಆ ಕೃತಜ್ನತೆಯಿಲ್ಲ.
ಮೊನ್ನೆ ಜುಲೈ 1 'National Doctors Day'. ಪ್ರತಿ ಸಲದಂತೆ ಈ ಸಲವೂ ಉಚಿತ ಆರೋಗ್ಯ ತಪಾಸಣೆ ಶಿಬಿರಗಳು, ರಕ್ತದಾನ ಶಿಬಿರಗಳು ನಡೆದವು. ಇಷ್ಟೇನಾ ನಮ್ಮನ್ನು ಕಾಯುವ ವೈದ್ಯರ ಕರ್ತವ್ಯ?

3 comments:

Dr.Shrinidhi L K said...

ಮಾನವೀಯ ಶ್ವೇತಾ ಅವರಿಗೆ,


ಪ್ರತಿ ಸಾರಿ ಡಾಕ್ಟರ್ಗಳ ಬಗ್ಗೆ ಲೇಖನ ಪ್ರಕಟವಾದಾಗಲೂ, ಲೇಖಕರು ಯಾವುದೋ ಒಂದು ಪ್ರಕರಣವನ್ನು ಹಿಡಿದುಕೊಂಡು ಪೂರ್ವಾಗ್ರಹ ಪೀಡಿತರಾಗಿ ಇಡೀ ವೈದ್ಯ ಸಮೂಹವನ್ನು, ಅವರ ಮಾನವೀಯತೆಯನ್ನು ಹಿಗ್ಗಾಮುಗ್ಗಾ ಬೈಯ್ಯುತ್ತಾರೆ. ಯಾವನೋ ಒಬ್ಬ ವೈದ್ಯ ಕೆಟ್ಟದಾಗಿ ವರ್ತಿಸಿದರೆ ಅದು ಮರುದಿನ ಬೆಳಿಗ್ಗೆಯ ಬಿಸಿ ಬಿಸಿ ಸುದ್ದಿಯಾಗುತ್ತದೆ. ಆದರೆ ಪ್ರತಿದಿನ 12 ರಿಂದ 14 ಗಂಟೆ ಕಾರ್ಯತತ್ಪರರಾಗಿರುವ ಉಳಿದ ಲಕ್ಷಾಂತರ ವೈದ್ಯರು ನಿಮಗೆ ಕಾಣುವದೇ ಇಲ್ಲವೇನೋ???

ಇರಲಿ ನಾನು ನಿಮ್ಮ ದೃಷ್ಟಿ ದೋಷದ ಬಗ್ಗೆ ಮಾತನಾಡುವ ಬದಲು ಅದನ್ನು ಸರಿ ಮಾಡಲು ಪ್ರಯತ್ನಿಸುತ್ತೇನೆ. ನಿಮಗೆ ಗೊತ್ತೇ ಅಂತಹ ಮಾನವೀಯತೆ ಇಲ್ಲದ ವೈದ್ಯರನ್ನು ನಿರ್ಮಿಸುತ್ತಿರುವವರು ಯಾರೆಂದು??? ಸಮಾಜವೇ!!!

ಸಾಮಾನ್ಯವಾಗಿ ವೈದ್ಯ ಕೋರ್ಸಗಳನ್ನು ಆರಿಸಿಕೊಳ್ಳುತ್ತಿರುವವರು ಪಿಯುಸಿಯಲ್ಲಿ ಮತ್ತು ಸಿಇಟಿಯಲ್ಲಿ ಉತ್ತಮ ಅಂಕ ಗಳಿಸಿದವರೇ. ವಯಸ್ಸು 17 ರಿಂದ 19ರ ಒಳಗಿನವರು. ಅದಿಲ್ಲದಿದ್ದರೆ ದುಡ್ಡು ಹೇರಳವಾಗಿರುವವರು. ಅವರ ಬಗ್ಗೆ ನಾನು ಮಾತಾಡಬೇಕಿಲ್ಲ. ಅವರ ಜೀವನ ಎಂದಿಗೂ ಸುಗಮ. ಸೀಟ್ ಪಡೆಯುವದರಿಂದ ಹಿಡಿದು ಮಾಕ್ರ್ಸಕಾರ್ಡ ಪಡೆಯುವವರೆಗೂ. ಅವರಿಗೆ ವಿವಿಗಳಲ್ಲಿ ದೊಡ್ಡ ದೊಡ್ಡ ಹುದ್ದೆಗಳಲ್ಲಿರುವ ವ್ಯಕ್ತಿಗಳ ಕೈ ಬಿಸಿ ಮಾಡುವದೂ ಗೊತ್ತು, ಪ್ರಶ್ನೆ ಪತ್ರಿಕೆ ಲೀಕ್ ಮಾಡಿಸುವದೂ ಗೊತ್ತು.

ಇಲ್ಲಿ ಶುರುವಾಗುತ್ತದೆ ಮೆರಿಟ್ ಸೀಟ್ ಪಡೆದವರ ಗ್ರಹಚಾರ. ಆದರ್ಶಕ್ಕೆ ಬಿದ್ದು ವೈದ್ಯಕೀಯ ವಿಭಾಗವನ್ನು ಆರಿಸಿಕೊಂಡಿದ್ದಕ್ಕೆ ಮುಖಕ್ಕೆ ಮಸಿ ಬಳಿದುಕೊಳ್ಳುವಂತಹ ಪರಿಸ್ಥಿತಿ. ಒಂದೆಡೆ ತುಂಬಾ ಓದಬೇಕೆಂಬ ಟೆನ್ಷನ್. ಜೊತೆಗೆ ಮ್ಯಾನೇಜಮೆಂಟ್ ಸೀಟ್ ಪಡೆದವರ ಹಾರಾಟ ನೋಡಿದರಂತೂ ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ಮನಸ್ಸಾಗುತ್ತದೆ. ಎಂದೂ ಕಾಲೇಜಿಗೆ ಕಾಲಿಡದವರು ಪೂರ್ಣ ಅಟೆಂಡೆನ್ಸ್ ಪಡೆದು ಪ್ರಶ್ನೆ ಪತ್ರಿಕೆ ಲೀಕ್ ಮಾಡಿಕೊಂಡೋ, ಅವರಿವರ ಕೈ ಬಿಸಿ ಮಾಡಿಯೋ ಉತ್ತಮ ಅಂಕ ಗಳಿಸಿ ಹೋಗಿಬಿಡುತ್ತಾರೆ. ಇಂತಹ ಸ್ಥಿತಿಯಲ್ಲಿ ಎಷ್ಟೊಂದು ವಿದ್ಯಾರ್ಥಿಗಳು(ನಿಜವಾದ) ಮಾನಸಿಕ ಒತ್ತಡಕ್ಕೆ ತುತ್ತಾಗುತ್ತಾರೆ.

ಇನ್ನೊಂದೆಡೆ ಪಿಯುಸಿಯಲ್ಲಿ ಜಸ್ಟ ಪಾಸಾಗಿ ಎಂಜಿನಿಯರಿಂಗ್ ಮಾಡಿರುವ ಸ್ನೇಹಿತರು 30 ರಿಂದ 40 ಸಾವಿರ ಎಣಿಸಿಕೊಳ್ಳತ್ತಿರುವಾಗ 10 ರಿಂದ 15 ಸಾವಿರಕ್ಕೆ ಐದೂವರೆ ವರ್ಷ ಓದಿ ಹಗಲು ರಾತ್ರಿ ದುಡಿಯುವ ಕಿರಿಯ ವೈದ್ಯರಿಗೆ ಸಮಾಜದ ಈ ತಾರತಮ್ಯವನ್ನು ನೋಡಿ ವಾಕರಿಕೆ ಬರದೇ ಇನ್ನೇನು ಪ್ರೀತಿ ಉಕ್ಕಬೇಕೇ??? ಇದೇ ತಾರತಮ್ಯದ ವಿರುದ್ಧ ವೈದ್ಯರು ಹೋರಾಡಲು ನಿಂತಾಗ ಇದೇ ರಾಜಕಾರಿಣಿಗಳು ಮತ್ತು ಮಾಧ್ಯಮದವರು ರೆಜಿಸ್ಟ್ರೇಷನ್ ರದ್ದುಪಡಿಸುವದಾಗಿ ಹೆದರಿಸಿ ವೈದ್ಯರ ಬಾಯಿ ಮುಚ್ಚಿಸುವದಿಲ್ಲವೇ???



ಸಮಾಜಕ್ಕೆ ವೈದ್ಯರಿಗಿಂತ ಸಾಫ್ಟವೇರ್ ತಂತ್ರಜ್ಞರೇ ಮುಖ್ಯವೇನೋ??? ಎಲ್ಲಿಯವರೆಗೆ ಸಮಾಜ ವೈದ್ಯರಿಗೆ ಅವರ ಓದಿಗೆ ತಕ್ಕ ವೇತನ ನೀಡುವದಿಲ್ಲವೋ ಅಲ್ಲಿಯವರೆಗೆ ಮಾನವೀಯತೆ ಇಲ್ಲದ ವೈದ್ಯರು ನಿರ್ಮಾಣವಾಗುತ್ತಲೇ ಇರುತ್ತಾರೆ. ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರಿಗೆ ಸಾಫ್ಟವೇರ್ ತಂತ್ರಜ್ಞರಿಗಿಂತ ಹೆಚ್ಚಿನ ವೇತನ ಕೊಡುವಂತೆ ಮಾಧ್ಯಮದವರು ಮಾಡಿ ತೋರಿಸಿ ಆಮೇಲೆ ವೈದ್ಯರು ಹಳ್ಳಿಗಳಿಗೆ ಯಾಕೆ ಹೋಗಲ್ಲ ಅಂತ ನೋಡೋಣ!!!

ನೀವು ವೈದ್ಯರ ಮಾನವೀಯತೆಯ ಬಗ್ಗೆ ಮಾತ್ರ ಮಾತನಾಡುತ್ತೀರಿ, ಸಮಾಜದವರ ಮಾನವೀಯತೆ ಬಗ್ಗೆ ನಿಮಗೆ ಗೊತ್ತೆ??? ಇದೇ ವೈದ್ಯ ಕಾಲೇಜುಗಳ ಪ್ರಾಕ್ಟಿಕಲ್ ಪರೀಕ್ಷೆಗಳಲ್ಲಿ ರೋಗಿಗಳು ಸಹಕರಿಸಲು 1000-1500 ರೂಪಾಯಿ ವೈದ್ಯ ವಿದ್ಯಾರ್ಥಿಗಳಿಂದ ಕೀಳುತ್ತಾರೆ ಇದು ನಿಮಗೆ ಗೊತ್ತೇ? ಇದು ಮಹಾ ಮಾನವೀಯತೆ ಏನೋ? ನೀವು ಏನು ಬೀಜ ಬಿತ್ತುತ್ತೀರೋ ಅದನ್ನೆ ಬೆಳೆಯುತ್ತೀರಿ. ಸಮಾಜದವರೇ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಹಣ ಕೀಳುವ ಭಾವನೆ ಬೆಳೆಸುವದು. ಕೋರ್ಸ ಆಯ್ಕೆ ಮಾಡಿಕೊಳ್ಳುವಾಗ ವಿದ್ಯಾರ್ಥಿಗಳು ಇನ್ನೂ ತುಂಬಾ ಚಿಕ್ಕವರಾಗಿರುತ್ತಾರೆ. ಅವರಲ್ಲಿ ಪುಸ್ತಕದ ಜ್ಞಾನ ಇರುತ್ತದೆಯೇ ಹೊರತು ಮಾನವೀಯತೆಯ ಶಿಕ್ಷಣ ನೀಡಬೇಕಾದವರು ಸಮಾಜದವರು.

ಇನ್ನು ನೀವು ಹೆರಿಗೆ ವಾರ್ಡ ಬಗ್ಗೆ ಪ್ರಸ್ತಾಪಿಸಿದಿರಿ. ಅಲ್ಲಿರುವ ಆಯಾಗಳ, ನರ್ಸಗಳ ಕೆಲಸದ ಸಮಯ 8-10 ಗಂಟೆಗಳು ಆದರೆ ಕಿರಿಯ ವೈದ್ಯರ ಕೆಲಸದ ಸಮಯ 12-14 ಗಂಟೆಗಳು!!! ಇದು ಯಾವ ಮಾನವೀಯತೆ???

ವೈದ್ಯಕೀಯ ಪುಸ್ತಕಗಳ ಮೌಲ್ಯ ಎಷ್ಟೆಂದು ನಿಮಗೆ ಅಂದಾಜಿರಬಹುದು ಅಂದರೆ ಮೆರಿಟ್ ಸೀಟ ಪಡೆದವರ ಕೈಗೆ ನಿಲುಕುವಂತದಲ್ಲ. ಕೋರ್ಸ ಮುಗಿಯುವದರೊಳಗೆ ಕಮ್ಮಿ ಎಂದರೂ 10-15 ಸಾವಿರ ಪುಸ್ತಕಗಳ ಮೇಲೆ ಖರ್ಚಾಗುತ್ತದೆ. ಇಷ್ಟಾದ ಮೇಲೆ ಕೆಲ ಕಾಲೇಜುಗಳಲ್ಲಿ ಗ್ರಂಥಾಲಯದ ಪುಸ್ತಕಗಳು ಕೇವಲ ಹಿಂದುಳಿದ ವರ್ಗದವರಿಗೆ ಮಾತ್ರ ಮನೆಗೆ ತೆಗೆದುಕೊಂಡು ಹೋಗಲು ಅವಕಾಶವಿದೆ. ಇದು ಯಾವ ಮಾನವೀಯತೆ???




ಇನ್ನು ಬರಿ ಎಂಬಿಬಿಎಸ್ ಮುಗಿಸಿ ಕೂತರೆ, ಅಪ್ಪ ಅಮ್ಮ ಮಾಡಿರುವ ಸಾಲ ತೀರಿಸುವದು ಹಾಗಿರಲಿ ನಮ್ಮ ಹೊಟ್ಟೆ ನೋಡಿಕೊಳ್ಳುವದೂ ಕಷ್ಟ. ಇನ್ನು ಉನ್ನತ ಶಿಕ್ಷಣ ಪಡೆಯೋಣವೆಂದರೆ ಒಂದೋ ಸಿಕ್ಕಾಪಟ್ಟೆ ದುಡ್ಡಿರಬೇಕು. ಇಲ್ಲದಿದ್ದರೆ 8-10 ವರ್ಷ ನಮಗೆ ಬೇಕಾದ ಕೋರ್ಸ ಮೆರಿಟ್ನಲ್ಲಿ ಸಿಗಲು ಕಾಯಬೇಕು. ಕಾರಣ ಏನು ಗೊತ್ತೇ ನಮ್ಮ ಸರಕಾರ ಒದಗಿಸಿರುವ ಉನ್ನತ ವೈದ್ಯಕೀಯ ಶಿಕ್ಷಣ ಸೀಟುಗಳು 10% ಕಿರಿಯ ವೈದ್ಯರಿಗೂ ಸಾಕಾಗುವದಿಲ್ಲ. ಇದು ಸರಕಾರ ಮೆರೆದ ಮಾನವೀಯತೆಯೇ???





ಇನ್ನೂ ಹೆಚ್ಚಿನ ವೈದ್ಯರ ನೋವು, ದುಃಖಗಳಿಗಾಗಿ ಕಿರಿಯ ವೈದ್ಯರ ಬ್ಲಾಗುಗಳಿಗೆ ಭೇಟಿ ಕೊಡಿ. ಸುಮ್ಮನೆ ನಮ್ಮ ಒಳನೋವುಗಳನ್ನು ತಿಳಿಯದೇ ಏನೇನೋ ಬರೆದು ಮಾನವೀಯತೆ ಉಳಿಸಿಕೊಂಡಿರುವ ಉಳಿದ ವೈದ್ಯರನ್ನು ಕೆರಳಿಸದಿರಿ.





ನೊಂದ ವೈದ್ಯ ವಿದ್ಯಾರ್ಥಿ

Dr.Shrinidhi L K said...

Mam people who work for tribal people will earn fame also and money also. They will be funded by NGOs and government. at the end they will get national award also. but what about common doctor working in rural setup? Will you ever invest in a company which is running in loss? Suppose let us think you have spent 10-15 lakhs on you studies(i am talking about general merit student coming from middle class family) and some invested 10-12 precious years of your life for professional course, then if you get very less salary in which you wont be able to earn back what you have spent, will you choose such career??? And by the way most of students coming from middle class family have taken educational loans. If after completion of education, they dont get a decent salary (for their qualification and number of years spent to study)who is going to pay for bank loans. Whole life will become miserable. Not only medical students repent for choosing the line but even experienced doctors are not satisfied by the justice created by the society for doctors. If you want you can make a survey. 90% of the present doctors advice their children not to come to medical field. Because society thinks that doctors should be like dharma chatra. By the way dharma chatras are also run by people who have lots of money not by a common man.

17 November 2010 5:40 AM

Laxman Kulkarni said...

mam i have not uploadeded the article completely please write comments after reading complete article. hope you dont mind. but as far as govt hospital labs are concerned, here is my explanation for a doctor sending a patient to a lab which he feels comfortable(its not only to make money and get commission, tomorrow when i become doctor i will also do the same): As you know there are know government published medical books as we used to have till 10th standard. And medical students use different different books while reading. And when they become doctors they use the normal physiological values they are comfortable with. I will explain with example. let us take, blood sugar some books give it in mg/dl and some books in IU/L like wise lab technicians while giving reports use the values which they are comfortable with. But its ultimately the doctor who has to diagnose and also remember all the physiological values. So he sends his patients to such lab which gives most accurate and easy to diagnose results.
And in govt hospitals i have seen they use very old apparatus for tests like Sahli's for haemoglobin in which if lab technician has eye problem you will get all ulta pulta results (And also this apparatus required day light to match the colour developed after test. Hope i have cleared.