Pages

Subscribe:

Ads 468x60px

Tuesday, November 17, 2009

ನಿನ್ನೆ ಅಫ್ಘಾನಿಸ್ತಾನ, ಇವತ್ತು ಪಾಕಿಸ್ತಾನ, ನಾಳೆ ಹಿಂದುಸ್ತಾನವೇ?

ಚಿಕ್ಕ ಹುಡುಗಿ ಆಗಿದ್ದಾಗ ಮನೆಗೆ ಬಂದವರೆಲ್ಲ "ನಿಮಗೆ ಇಬ್ರೂ ಹುಡುಗಿಯರೆನಾ ?" ಅಂತ ಅಮ್ಮನ ಹತ್ರ ಕೇಳುವಾಗ ಸಿಟ್ಟು ಬರ್ತಿತ್ತು. ಅಮ್ಮ "ಅವ್ರೆಲ್ಲ ಹಾಗೇ ಬಿಡು" ಅಂತ ಸಮಾಧಾನ ಮಾಡುತ್ತಿದ್ದಳು. ಬೇರೆ ಯಾರು ಹೆಣ್ಣಿನ ಬಗ್ಗೆ ಕೀಳಾಗಿ ಮಾತಾಡಿದ್ರೂ ಸಿಟ್ಟು ಬರ್ತಿತ್ತು. ಆದ್ರೆ ನಾನು feminist ಆಗಿರಲಿಲ್ಲ, ನನಗೆ feminism ಬಗ್ಗೆ ಒಳ್ಳೆ ಅಭಿಪ್ರಾಯ ಕೂಡ ಇರ್ಲಿಲ್ಲ, ಕಾರಣ, feminism ಅಂತ ಹೇಳಿಕೊಂಡು ತಿರುಗುವವರೆಲ್ಲ ದಿನದ ಅನ್ನಕ್ಕೆ ದುಡಿಯೊ ಅವಶ್ಯಕತೆ ಇಲ್ಲದೆ ಇರೋ ಹಾಗೇ ಕಷ್ಟದ ಅರಿವೂ ಇಲ್ಲದೆ ಇರೋ ಶ್ರೀಮಂತ, glamorous ಹೆಂಗಸರು. ಅವರಿಗೆ ನಿಜವಾಗಲೂ ಬಡ ಸ್ತರದಲ್ಲಿ ಬದುಕೊ ಹೆಂಗಸರ ಬಗ್ಗೆ ಗೊತ್ತಿಲ್ಲ. ಆದ್ರೆ feminismನ ಅಗತ್ಯ, ಅದರ ಪರವಾಗಿ ಯಾರಾದ್ರೂ ಹೋರಾಟ ಮಾಡಲಿ, ನಿಜವಾಗ್ಲೂ ಇದೆ ಅಂತ ಅನ್ನಿಸಿದ್ದು ಅಫಘಾನಿಸ್ತಾನದ ಹೆಣ್ಣನ್ನು ನೋಡಿದಾಗ. ಪ್ರಾಯಶಃ ಜಗತ್ತಿನ ಅತಿ ದೊಡ್ಡ ಮಾನವ ಹಕ್ಕುಗಳ ಉಲ್ಲಂಘನೆ ಎಂದು ಪರಿಗಣಿಸಲಾಗಿರುವ ಅವರ ಮೇಲಾಗುತ್ತಿರುವ ದೌರ್ಜನ್ಯಗಳನ್ನು ನೋಡಿದಾಗ. ಬಯಲಲ್ಲಿ ಒಬ್ಬಳು ಹೆಣ್ಣನ್ನು ೫ ಜನ ಸುತ್ತುವರಿದು ಚಾಟಿಯಲ್ಲಿ ಹೊಡೆದು ಸಾಯಿಸುವುದನ್ನು ನೋಡಿ ನನಗೆ ಮಾತ್ರ ಅಲ್ಲ ಯಾರಿಗದ್ರು ಕರುಳು ಚುರ್ ಅನ್ನುತ್ತೆ ಅಲ್ವಾ? ಅವಳು ಮಾಡಿದ ತಪ್ಪೇನು? ಮನೆ ಬಿಟ್ಟು ಹೊರಗೆ ಬಂದಿದ್ದು ಅಷ್ಟೇನಾ? ಹೆಸರಿಗೆ ತಾಲಿಬಾನ್ ಆಡಳಿತ ಹೋಗಿ ೮ ವರ್ಷಗಳಾಯಿತು. ಹೆಸರಿಗೆ ಅಲ್ಲಿಯವರದೇ ಆಡಳಿತ. ಅವರ ಸಾಧನೆಗಳ ವಿವರಣೆಗಳನ್ನು ದಿನಾ ಓದ್ತೀವಿ. ೭೦,೦೦,೦೦೦ ಮಕ್ಕಳು ಶಾಲೆಗೆ ಹೊಗ್ತಾ ಇದ್ದಾರೆ, ಅದರಲ್ಲಿ ಶೇಕಡಾ ೪೦ ಹುಡುಗಿಯರು, ನೋಡಿ ನಮ್ಮ ಸಾಧನೆ ಅನ್ನುತ್ತಾರೆ ಅಲ್ಲಿಂದ ಹೊರಬಂದ ಅಫ್ಗಾನಿಗಳು.
ಹೊರ ಪ್ರಪಂಚಕ್ಕೆ ಕಾಣೋದು ಸಾಧನೆಗಳು ಮಾತ್ರ. ಅಲ್ಲಿಯ ಜನ ಯಾವಾಗ ತಾಲಿಬಾನಿಗಳು ತಿರುಗಿ ಬರುತ್ತಾರೋ, ಯಾವಾಗ ನಾವೆಲ್ಲಾ ಆ ಉಸಿರುಗಟ್ಟಿಸುವ ವಾತಾವರಣಕ್ಕೆ ಮರಳುತ್ತೀವೋ ಅಂತ ಹೆದರಿಕೊಂಡೇ ಬದುಕುತ್ತಿದ್ದಾರೆ. So-called "ಮಾನವತಾವಾದಿಗಳು" ಸುಮ್ಮನಿದ್ದುದೇಕೆ? ಎಲ್ಲೋ ಯಾವುದೋ ದೇಶದಲ್ಲಿ ನಡೆಯೋ ಘಟನೆಗಳಿಗೂ, ನಮಗೂ ಸಂಬಂಧವಿಲ್ಲ ಅಂತಾನಾ? ಯಾಕೆ ಅವರು ಮನುಷ್ಯರಲ್ವಾ? ಅಥವಾ ನಮ್ಮ ದೇಶದಲ್ಲಿ ನಡೆಯುತ್ತಾ ಇರೊದಕ್ಕೆ ತೋರಿಸೋ ಕನಿಕರಕ್ಕೆ ಸಿಗೋ ಪ್ರಚಾರ, ಹೆಸರು, ಬುದ್ಧಿಜೀವಿಗಳ ಪಟ್ಟ, ಅಷ್ಟು ದೂರದ ದೇಶದ ನೊಂದವರಿಗೆ ತೋರಿಸಿದ್ರೆ ಸಿಗುವುದಿಲ್ಲ ಅಂತಾನಾ? ಅಥವಾ ತಾಲಿಬಾನಿಗಳು ಹಿಂದೂ ಜನರ ತರ ಹೇಳಿದ್ದೆಲ್ಲ ಕೇಳಿಸಿಕೊಂಡು ಸುಮ್ಮನೆ ಇರುವುದಿಲ್ಲ ಅಂತ ಹೆದರಿಕೆನಾ?
ಅಫ್ಘಾನಿಸ್ತಾನದವರೆಗೆ ಹೋಗೋದೇ ಬೇಡ. ನಮ್ಮ ನೆರೆಯ ಪಾಕಿಸ್ತಾನಕ್ಕೆ ಕಾಲಿಟ್ಟು ೪೦೦ಕ್ಕೂ ಹೆಚ್ಚು ಶಾಲೆಗಳನ್ನು ಮುಚ್ಚಿಸಿ, ೫೦,೦೦೦ಕ್ಕೂ ಹೆಚ್ಚು ಹುಡುಗಿಯರನ್ನು ಹೆದರಿಸಿ, ಶಾಲೆ ಬಿಡಿಸಿದ್ದಾರೆ ತಾಲಿಬಾನಿಗಳು. "ಒಬ್ಬ ಮಗಳು ಹುಟ್ಟಿದರೆ, ಅವಳ ತಂದೆ ಅವಳನ್ನು ಚೆನ್ನಾಗಿ ಸಾಕಿದರೆ, ವಿದ್ಯೆ ಕಲಿಸಿದರೆ, ಜೀವನ ಕಲೆಗಳಲ್ಲಿ ಅವಳನ್ನು ಪರಿಣಿತಳನ್ನಾಗಿಸಿದರೆ, ಆ ತಂದೆಯ ಮತ್ತು ನರಕದ ಬೆಂಕಿಯ ಮಧ್ಯೆ ನಾನೇ ನಿಲ್ಲುತ್ತೇನೆ." ಈ ವಾಕ್ಯಗಳು ಇರುವುದು ಯಾವ radical ದೇಶದ radical ಪುಸ್ತಕದಲ್ಲೂ ಅಲ್ಲ, ಬದಲಾಗಿ ಕನ್ಝ್ ಅಲ್-ಉಮ್ಮರ್ ಅನ್ನುವ ಇಸ್ಲಾಮಿಕ್ ಹದಿತ್ ಸಂಕಲನದಲ್ಲಿ. ಅದು ಎಲ್ಲಾ ಧರ್ಮಗಳ ಪುಸ್ತಕಗಳಲ್ಲಿರುವ ಬುದ್ದಿಮಾತುಗಳ ಹಾಗೆ ಪುಸ್ತಕಕ್ಕೆ ಮಾತ್ರ ಸೀಮಿತವಾಗಿದೆ.
Anyway, ಹೆಣ್ಣಿನ ಮೇಲಿನ ದೌರ್ಜನ್ಯಕ್ಕೆ ತಾಲಿಬಾನಿಗಳೆ ಯಾಕೆ ಬೇಕು ನಮ್ಮ ದೇಶಕ್ಕೆ? ನಮ್ಮದೇ ಡಾಕ್ಟರ್ ಗಳು ದುಡ್ಡು ತೆಗೆದುಕೊಂಡು ಆ ಕೆಲಸ ಮಾಡ್ತಾರೆ. ಕೆಲವು ತಿಂಗಳುಗಳ ಹಿಂದೆ ಇಬ್ಬರು ಪತ್ರಕರ್ತರು ಮಾರುವೇಷದಲ್ಲಿ ಆಗ್ರಾದ ಒಬ್ಬ ವೈದ್ಯರ ಹತ್ತಿರ ಸತ್ತ ಹೆಣ್ಣು ಭ್ರೂಣವನ್ನು ಏನು ಮಾಡುವುದು ಎಂದು ಕೇಳಿದಾಗ, ಆ ವೈದ್ಯ "ಒಂದು ರಿಕ್ಷಾದಲ್ಲಿ ತೆಗೆದುಕೊಂಡು ಹೋಗಿ ಯಮುನಾ ನದಿಯಲ್ಲಿ ಬಿಸಾಡಿ" ಅಂದನಂತೆ. ರಾಜಸ್ತಾನದ ಧೋಲ್ ಪುರದಲ್ಲಿ ಒಬ್ಬ ವೈದ್ಯೆಯ ಪ್ರಕಾರ ಎಷ್ಟೋ ಗದ್ದೆಗಳಲ್ಲಿ ಅನಾಮಿಕ ಹೆಣ್ಣು ಭ್ರೂಣಗಳ ಸಮಾಧಿಗಳು ಬೇಕಾದಷ್ಟಿವೆ. "ನಿಮ್ಮ ಭ್ರೂಣ ಬಿಸಾಡಲು ಆಗದೆ ಇರುವಷ್ಟು ದೊಡ್ಡದಿದ್ದರೆ, ರಸ್ತೆ ಗುಡಿಸುವ ಮಾಲಿಗೆ ಕೊಡಿ, ಜೊತೆಗೆ ಸ್ವಲ್ಪ ದುಡ್ಡು ಕೊಡಿ, ಅವರು ನೋಡಿಕೊಳ್ತಾರೆ," ಅಂದಳಂತೆ ಆ ವೈದ್ಯೆ.
ನಿನ್ನೆ ಅಫ್ಘಾನಿಸ್ತಾನ, ಇವತ್ತು ಪಾಕಿಸ್ತಾನ, ನಾಳೆ ತಾಲಿಬಾನಿಗಳು ನಮ್ಮ ಮನೆಯ ಕದ ತಟ್ಟಿ, ನಾವು, ನಮ್ಮ ಮಕ್ಕಳು ಬದುಕುತ್ತಿರೊ ಈ ನೆಮ್ಮದಿಯ, ಸ್ವತಂತ್ರ ಬದುಕಿಗೆ ಬೇಲಿ ಹಾಕೋ ಮುಂಚೆ ನಾವು ಎಚ್ಚೆತ್ತುಕೊಳ್ಳುವುದು ನಮಗೇ ಒಳ್ಳೆಯದು. ಆದರೆ, ಅಫ್ಘಾನಿಸ್ತಾನದಲ್ಲಿ ಹೆಂಗಸರು, ಮಕ್ಕಳು ಬೂದಿ ಮುಚ್ಚಿದ ಕೆಂಡದಂತೆ ಇನ್ನೂ ಅನುಭವಿಸುತ್ತಾ ಇರೋ ಯಾತನೆಗಳ ಬಗ್ಗೆ ನನ್ನ ಪರಿಚಯದ ಒಬ್ಬಳು ಮುಸ್ಲಿಮ್ ಹುಡುಗಿಗೆ ಹೇಳಿದಾಗ ನನಗೆ ಸಿಕ್ಕ ಉತ್ತರ ಅಲ್ಲಿನ ಸ್ಥಿತಿಗಿಂತ ಆಶ್ಚರ್ಯ ಹುಟ್ಟಿಸುವಂತೆ ಇತ್ತು. ಅಲ್ಲಿ ಕೊಡೋ ಚಿತ್ರಹಿಂಸೆಗಳ ಬಗ್ಗೆ ಅವಳ ಪ್ರತಿಕ್ರಿಯೆ, " ಅವರೆಲ್ಲಾ ಏನೋ ತಪ್ಪು ಮಾಡಿರ್ತಾರೆ, ಇಲ್ಲಾಂದ್ರೆ ಯಾಕೆ ಶಿಕ್ಷೆ ಕೊಡ್ತಾರೆ?" ಎಷ್ಟು ಜನ ತಪ್ಪು ಮಾಡಲು ಸಾಧ್ಯ? ಒಬ್ಬರಾ? ನೂರು ಜನ? ಅಥವಾ ಸಾವಿರಾರು ಜನ?
ಇಲ್ಲೇ feminismನ ಅಗತ್ಯ ಇರೋದು. ಅನ್ಯಾಯಗಳ ವಿರುದ್ಧ ಪ್ರತಿಭಟನೆ ಮಾಡೋದು ಮಾತ್ರ feminism ಅಲ್ಲ, ಎರಡು ತಿಂಗಳು ಬಿಸಿ ಆರೋವರೆಗೆ ಪತ್ರಿಕೆಗಳಿಗೆ ಹೇಳಿಕೆ ಕೊಡೋದು, ಸಂಘ ಕಟ್ಟಿಕೊಂಡು ಭಾಷಣ ಬಿಗಿಯೋದು ಕೂಡ feministsಗಳು ಮಾಡಬೇಕಾದ ಅತ್ಯಗತ್ಯ ಕೆಲಸ ಅಲ್ಲ. ಅವರು ಮಾಡಬೇಕಾದುದು ಇಷ್ಟೆ: ಹೆಣ್ಣು ಮಕ್ಕಳ ಹಕ್ಕುಗಳ ಬಗ್ಗೆ ಅವರಲ್ಲಿ ಜಾಗ್ರತಿ ಮೂಡಿಸಬೇಕು, ನಮ್ಮನ್ನು ಸಂಪ್ರದಾಯ ಅನ್ನೋ ನೆಪದಲ್ಲಿ ಅರ್ಥವಿಲ್ಲದ, ಅಪಾಯಕಾರಿ ಆಚರಣೆಗಳಿಗೆ ಒಡ್ಡಿದರೆ ತಿರಸ್ಕರಿಸುವ ಹಕ್ಕು ನಮಗೆ ಇದೆ ಅಂತ ಅರಿವು ಮೂಡಿಸಿದರೆ ಸಾಕು, ಇಲ್ಲಿ ಯಾವ ಸಮಾಜ ದ್ರೋಹಿ ಶಕ್ತಿಯನ್ನು ಬೇಕಾದರೂ ಹರಡದಂತೆ ತಡೆಯಬಹುದು. ನಮ್ಮ ದೇಶದಲ್ಲಿ ಜಾತಿ, ಮತ ಬೇಧವಿಲ್ಲದೆ ಎಲ್ಲಾರಿಗೂ ಇರೋ ಸ್ವಾತಂತ್ರ್ಯ ಬೇರೆ ಯಾವ ದೇಶದಲ್ಲೂ ಇಲ್ಲ ಅಂತ ಅಲ್ಲಿಗೆ ಹೋಗಿ ಅನುಭವಿಸಿದವರಿಗೆ ಮಾತ್ರ ಗೊತ್ತು. ಎಷ್ಟು ಬೈದರೂ, ಎಷ್ಟು ತಿರಸ್ಕಾರ ಮಾಡಿದರೂ, ಹಾಗೆ ಬೈಯ್ಯಲೂ ಇಲ್ಲಿ ಮಾತ್ರ ನಿಜವಾದ ಸ್ವಾತಂತ್ರ್ಯ ಇರುವುದು. It is a sin to be a free person in Afghanistan, an intellectual individual in Pakistan. ಈ ಸ್ಥಿತಿ ನಮ್ಮ ದೇಶಕ್ಕೂ ಬರದೇ ಇರಲಿ. --ಶ್ವೇತಾ ಪಾಂಗಣ್ಣಾಯ

0 comments: